ಸಾಲ್ಬುಡ ರಸ್ತೆ ಅಭಿವೃದ್ಧಿಗೆ ರಾಜಕಾರಣಿಗಳ ಅಡ್ಡಗಾಲು !


ನಾವುಂದ: ಗ್ರಾಮದ ನೆರೆಪೀಡಿತ ಪ್ರದೇಶವಾದ ಸಾಲ್ಬುಡದ ಮುಳುಗು ರಸ್ತೆಗೆ ಸಮಗ್ರ ಅಭಿವೃದ್ಧಿಗೆ ರಾಜಕಾರಣಿಗಳು ಅಡ್ಡಗಾಲು ಹಾಕಿದ್ದಾರೆ ಎಂದು ಸ್ಥಳೀಯ ಗ್ರಾಮಸ್ಥರು ಅವಲತ್ತುಕೊಂಡಿದ್ದಾರೆ.
           ನೆರೆಪೀಡಿತ ನಾವುಂದ ಸಾಲ್ಬುಡ ರಸ್ತೆ ಅಭಿವೃದ್ಧಿಗಾಗಿ ಬೈಂದೂರು ಶಾಸಕರು ಮಂಜೂರುಗೊಳಿಸಿದ ಅನುದಾನವನ್ನು ಬಾಗಿನಮನೆ ರಸ್ತೆ ಕಾಮಗಾರಿಗೆ ಬಳಸಿಕೊಂಡಿದ್ದರಿಂದ ಸಾಲ್ಬುಡ ರಸ್ತೆ ಅಭಿವೃದ್ಧಿ ಕನಸಾಗಿಯೇ ಉಳಿಯಿತು. ನೆರೆ ಹಾವಳಿಯಿಂದ ಅತೀವ ತೊಂದರೆಗೀಡಾಗುವ ಸಾಲ್ಬುಡ ರಸ್ತೆಯನ್ನು ಅಭಿವೃದ್ಧಿಗೊಳಿಸಲು ಕಡೆಗಣಿಸಿದ್ದರಲ್ಲಿ ಸ್ಥಳೀಯ ಮಟ್ಟದ ರಾಜಕೀಯ ವ್ಯಕ್ತಿಗಳು ಕೈವಾಡ ನಡೆಸಿದ್ದಾರೆ ಎಂದು ಆರೋಪಿಸಿ ಇಲ್ಲಿನ ಜನತೆ ಪ್ರತಿಭಟನೆಗೆ ಮುಂದಾಗಿದ್ದರಿಂದ ಎಚ್ಚೆತ್ತ ಜನಪ್ರತಿನಿಧಿಗಳು ನಾವುಂದ ಗ್ರಾಮಕ್ಕೆ ಮಂಜೂರಾದ ಸುವರ್ಣ ಗ್ರಾಮೋದಯ ಯೋಜನೆಯ ಅನುದಾನದಿಂದ ರಸ್ತೆ ಅಭಿವೃದ್ಧಿಗೊಳಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇದೀಗ ಸಾಲ್ಬುಡ ರಸ್ತೆ ಅಭಿವೃದ್ಧಿಗಾಗಿ ಬಳಸಲುದ್ದೇಶಿಸಿದ್ದ ಅನುದಾನವನ್ನು ಬೇರೆ ಕಾಮಗಾರಿಗೆ ವಗರ್ಾಯಿಸಲಾಗಿದೆ ಎನ್ನಲಾಗಿದ್ದು ಸಾಲ್ಬುಡ ಜನತೆ ಆಕ್ರೋಶಗೊಂಡಿದ್ದಾರೆ.
      ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅವರ ಅಲ್ಪಮೊತ್ತದ ಅನುದಾನದಿಂದ ಸಾಲ್ಬುಡ ರಸ್ತೆಗೆ ಬದಿಕಟ್ಟುವಿಕೆ ಕಾಮಗಾರಿಯನ್ನು ನಡೆಸಲಾಗಿತ್ತಾದರೂ, ಇಲ್ಲಿನ ಬಾಗಿನಮನೆ ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ ಸಾಮಗ್ರಿಗಳನ್ನು ಹೊತ್ತೊಯ್ದು ಓಡಾಡಿದ ಲಾರಿ-ಟಿಪ್ಪರುಗಳ ಅಬ್ಬರಕ್ಕೆ ನಲುಗಿದ ಸಾಲ್ಬುಡ ರಸ್ತೆ ಹದಗೆಟ್ಟು ಸ್ಥಳೀಯರ ಸಂಚಾರಕ್ಕೆ ಸಮಸ್ಯೆಯನ್ನು ಉಂಟುಮಾಡಿದ ಕುರಿತು ಉದಯವಾಣಿ ವರದಿ ಪ್ರಕಟಿದ ಬಳಿಕ ಇಲ್ಲಿನ ರಸ್ತೆಯ ಹೊಂಡಗಳಿಗೆ ಒಂದಷ್ಟು ಹಂಚಿನ ಹುಡಿಯನ್ನು ತಂದು ಸುರಿಯಲಾಗಿತ್ತು. 
   ಸೌಪಣರ್ಣಿಕಾ ನದೀತೀರದ ಸಾಲ್ಬುಡ, ಬಾಗಿನಮನೆ, ಅರೆಹೊಳೆ ಮೊದಲಾದ ಪ್ರದೇಶಗಳು ಅತೀ ಹೆಚ್ಚು ತಗ್ಗುಪ್ರದೇಶದಲ್ಲಿರುವುದರಿಂದ ನೆರೆಬಂದಾಗ ಮೊದಲು ಮುಳುಗಡೆಯಾಗುವುದು ಸಾಲ್ಬುಡ ಪ್ರದೇಶ. ಆದರೆ ಇಲ್ಲಿನ ರಸ್ತೆಯ ಅಭಿವೃದ್ಧಿಗಾಗಿ ಮಂಜೂರುಗೊಳಿಸುವುದಾಗಿ ನುಡಿದು ಬಳಿಕ ಹಣವನ್ನು ಬಳಸುವ ವಿಚಾರದಲ್ಲಿ ರಾಜಕೀಯ ನಡೆಸಿದ್ದರಿಂದ ಸೌಲಭ್ಯದ ಪ್ರಯೋಜನ ಸಾಲ್ಬುಡಕ್ಕೆ ಮರೀಚಿಕೆಯಾಗಿದೆ. ಒಟ್ಟಿನಲ್ಲಿ ಸಾಲ್ಬುಡ ಜನತೆ ರಸ್ತೆ ದುರವಸ್ಥೆಯಿಂದ ಮುಕ್ತಿ ಪಡೆಯುವ ಗಳಿಗೆ ಯಾವಾಗ ಬರುವುದೋ ?
-ಚಂದ್ರ ಕೆ. ಹೆಮ್ಮಾಡಿ


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com