ಕುಂದಾಪುರ : ತಾಲೂಕಿನ ಪ್ರಸಿದ್ದ ಕಾರಣಿಕ ಕ್ಷೇತ್ರವಾದ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಾಲಯದಲ್ಲಿ ವಾರ್ಷಿಕ ಗೆಂಡಸೇವೆ ಮತ್ತು ಜಾತ್ರ ಮಹೋತ್ಸವ ಮಕರ ಸಂಕ್ರಾತಿಯಂದು ವಿಜ್ರಂಭಣೆಯಿಂದ ನಡೆಯಿತು.
ಬೆಳಿಗ್ಗೆನಿಂದಲೇ ಅಪಾರ ಸಂಖೆಯಲ್ಲಿ ಭಕ್ತರು ಶ್ರೀ ಕ್ಷೆತ್ರಕ್ಕಾಗಮಿಸಿ ಶ್ರೀ ದೇವರ ದರ್ಶನ ಪಡೆದರು. ಬ್ರಹ್ಮಲಿಂಗೇಶ್ವರನಿಗೆ ಪ್ರಿಯವಾದ ಸೇವಂತಿಗೆ ಮತ್ತು ಶೃಂಗಾರ ಪುಷ್ಪವನ್ನು ಅರ್ಪಿಸಿ ಹರಕೆ ತೀರಿಸಿದರು. ಸಂಕ್ರಮಣದ ರಾತ್ರಿ ಕೆಂಡಸೇವೆ, ಮರುದಿನ ಜಾತ್ರಮಹೊತ್ಸವ, ತುಲಾಭಾರ ಹಾಗೂ ಡಕ್ಕೆ-ಬಲಿ ಸೇವೆಗಳು ನಡೆದವು.