ವಿವೇಕಾನಂದರ ಜೀವನ ತತ್ವಸಂದೇಶ ಉಪನ್ಯಾಸ


ಹೆಮ್ಮಾಡಿ:   ಭಾರತೀಯ ಸನಾತನ ಸಂಸ್ಕೃತಿ, ಧರ್ಮ, ಅಧ್ಯಾತ್ಮ, ವೇದೋಪನಿಷತ್ತು, ಸಂಸ್ಕಾರ, ಮೌಲ್ಯಾದರ್ಶಗಳನ್ನು ಜಗತ್ತಿಗೆ ಪರಿಚಯಿಸಿ ಭಾರತದ ಕುರಿತು ವಿದೇಶೀಯ ಜನರಲ್ಲಿದ್ದ ತಾತ್ಸಾರ ಮನೋಭಾವನೆಯನ್ನು ಹೋಗಲಾಡಿಸಿ ಭರತವರ್ಷದ ಆತ್ಮಾಭಿಮಾನವನ್ನು ಎತ್ತಿಹಿಡಿದ ಮಹಾನ್ ರಾಷ್ಟ್ರಭಕ್ತ ಸಂತ ಸ್ವಾಮಿ ವಿವೇಕಾನಂದರು. ಅವರ ಜೀವನ ಹಾಗೂ ತತ್ವಸಂದೇಶಗಳು ಸಾರ್ವಕಾಲಿಕ ಪ್ರಸ್ತುತತೆಯನ್ನು ಪಡೆದಿವೆ ಎಂದು ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ ಹೇಳಿದರು. 
    ಅವರು ಯಲ್ಲಾಪುರ ತಾಲೂಕಿನ ಗುಳ್ಳಾಪುರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜನವರಿ 23ರಂದು ಜರಗಿದ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದರ ಜೀವನ ತತ್ವಸಂದೇಶ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
   ಭಾರತೀಯ ಜೀವನ ಧರ್ಮದ ಅಂತಃಸತ್ವವನ್ನು ಸರ್ವಸಮ್ಮತವಾಗುವ ರೀತಿಯಲ್ಲಿ ಜಗತ್ತಿನ ಜನರ ಮನಗಾಣಿಸಿದ ವಿವೇಕಾನಂದರು ಮಾನವೀಯ ಧರ್ಮದ ನೈಜ ಪ್ರತಿಪಾದಕರಾಗಿದ್ದಾರೆ ಎಂದು ಅವರು ಹೇಳಿದರು. ಪ್ರಭಾರ ಪ್ರಾಂಶುಪಾಲ ಎಂ. ಜಿ. ನಾಯ್ಕ ಅಧ್ಯಕ್ಷತೆ ವಹಿಸಿದ್ದರು.
   ಮುಖ್ಯ ಅತಿಥಿ ಕಾಲೇಜಿನ ಉಪನ್ಯಾಸಕರಾದ ಶೋಭಾ ಗೌಡ, ಅಜಯ ಶೇಟ್, ನಾಗಶ್ರೀ ಭಟ್, ಬಾಲಸುಬ್ರಹ್ಮಣ್ಯ ಭಟ್, ಪ್ರೌಢಶಾಲಾ ಸಹಶಿಕ್ಷಕರಾದ ಡಿ. ಟಿ. ನಾಯಕ, ರಮೇಶ್ ನಾಯ್ಕ, ಗೀತಾ ಟಿ. ಪೆಡ್ನೇಕರ್, ರಾಧಾ ಎನ್, ನಾಯ್ಕ, ಎನ್. ವಿ. ಭಟ್ಟ, ಮಾಲತಿ ಆಚಾರಿ ಹಾಗೂ ಪ್ರಥಮದಜರ್ೆ ಸಹಾಯಕ ಟಿ. ವಿ. ಕವಡಿಕೇರಿ ಮೊದಲಾದವರು ಉಪಸ್ಥಿತರಿದ್ದರು.
    ವಿವೇಕ ಸಪ್ತಾಹದ ಅಂಗವಾಗಿ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾಥರ್ಿಗಳಿಗೆ ನಡೆಸಲಾದ ವಿವಿಧ ಸ್ಫಧರ್ೆಗಳಲ್ಲಿ ವಿಜೇತರಾದವರಿಗೆ ಬೈಂದೂರು- ಯಳಜಿತ್ನ ಶ್ರೀ ಸಿದ್ಧಿವಿನಾಯಕ ಸಾಂಸ್ಕೃತಿಕ ಸಂಘದ ಸಂಚಾಲಕ ಮಂಗೇಶ್ ಶೆಣೈ ಅವರು ಕೊಡಮಾಡಿದ ಸ್ವಾಮಿ ವಿವೇಕಾನಂದರ ಕುರಿತ ಪುಸ್ತಕ ಬಹುಮಾನಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.
    ಉಪಪ್ರಾಂಶುಪಾಲೆ ಪರಮೇಶ್ವರಿ ಜಿ. ಭಟ್ಟ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ರಾಮಮೂರ್ತಿ ನಾಯಕ ಪರಿಚಯಿಸಿದರು. ವಿದ್ಯಾರ್ಥಿನಿ ವನಿತಾ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕ ರಾಜೀವ ನಾಯ್ಕ ವಂದಿಸಿದರು.


ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com