ಜನವರಿ 26ಕ್ಕೆ 'ಹೊಯ್ಕ-ಬರ್ಕ್' ಕುಂದಾಪ್ರ ಕನ್ನಡ ಸಮ್ಮೇಳನ

ಕುಂದಾಪುರ: ಕುಂದಾಪುರ ಪರಿಸರದ ಆಡುಭಾಷೆಯಾಗಿರುವ ಕುಂದಾಪ್ರ ಕನ್ನಡದಲ್ಲಿ  'ಹೊಯ್ಕ-ಬರ್ಕ' ಒಂದು ದಿನದ ಸಮ್ಮೇಳನ ಜನವರಿ 26ರಂದು ಬಸ್ರೂರಿನಲ್ಲಿ ನಡೆಯಲಿದೆ. ಬಸ್ರೂರು ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಸಂಘದ ಪ್ರಾಯೋಜಕತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಕೋಟದ ಉಸಿರು ಸಂಸ್ಥೆ ಸಹಯೋಗ ನಿಡಲಿದೆ.
    ಚುಟುಕು ಸಾಹಿತಿ ದುಂಡಿರಾಜ್ ಹೊಯ್ಕ-ಬರ್ಕ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದು ಬಸ್ರೂರು ಪ್ರೌಡಶಾಲಾ ವಠಾರದ ದಿ. ಬಿ.ವಿ.ಆರ್. ಹೆಗ್ಡೆ ಸಭಾಂಗಣದಲ್ಲಿ ಜ.26 ರಂದು ಸಮ್ಮೇಳನ ನಡೆಯಲಿದೆ. ಬೆಳಿಗ್ಗೆ 8:30ಕ್ಕೆ ಪುರಮೆರವಣಿಗೆ ನಡೆಯಲಿದ್ದು ಸಮ್ಮೇಳನವನ್ನು ಉಡುಪಿ ಕಸಾಪ ಮಾಜಿ ಅಧ್ಯಕ್ಷ ಉಪ್ಪುಂದ ಚಂದ್ರಶೇಖರ್ ಹೊಳ್ಳ ಉದ್ಘಾಟಿಸಿಲಿದ್ದಾರೆ.

     ಹಿರಿಯ ನ್ಯಾಯವಾದಿ ಎ.ಎಸ್.ಎನ್. ಹೆಬ್ಬಾರ್ ಸಾರಥ್ಯದಲ್ಲಿ 'ಕುಂದಾಪ್ರ ಭಾಷಿ; ಹ್ಯಾಂಗಿದ್ದಿತ್..! ಹ್ಯಾಂಗ್ ಆಯ್ತ..! ಹ್ಯಾಂಗ್ ಆಯ್ಕ್..!' ಕುರಿತಾಗಿ ವಿಚಾರಗೋಷ್ಠಿ ನಡೆಯಲಿದೆ. ಈ ಗೋಷ್ಠಿಯಲ್ಲಿ ಪ್ರೊ. ಕನರಾಡಿ ವಾದಿರಾಜ್ ಭಟ್, ಉಪನ್ಯಾಸಕ ಸುರೇಂದ್ರ ಶೆಟ್ಟಿ. ಕೋಟ ಉಸಿರು ಸಂಸ್ಥೆಯ ನರೇಂದ್ರ ಕುಮಾರ್ ಕೋಟ ಭಾಗವಹಿಸಲಿದ್ದಾರೆ. ಅನಂತರ ಪ್ರಸಿದ್ಧ ಹಾಸ್ಯ ಕಲಾವಿದ ಹಳ್ಳಾಡಿ ಜಯರಾಮ್ ಶೆಟ್ಟಿ ಮತ್ತು ಖ್ಯಾತ ಭಾಗವತ ಸುರೇಶ ಶೆಟ್ಟಿ ಸಾರಥ್ಯದಲ್ಲಿ 'ಹ್ವಾಯ್ ಒಂದ್ ಗಳ್ಗಿ ಆಟ ಕಾಂಬಲೇ' ಯಕ್ಷಗಾನ ಹಾಸ್ಯ ರಸಾಯನವಿದೆ.

           ಮ.1:30ಕ್ಕೆ 'ಪಣ್ಕ ಮಕ್ಕಳ್ ಕೊಣತ' ದಲ್ಲಿ ಕುಂದಾಪ್ರ ಕನ್ನಡನ ಹಾಡಿಗೆ ಕಲಾವಿದರು ಹೆಜ್ಜೆ ಹಾಕಲಿದ್ದಾರೆ. ಅನಂತರ ಮಂಜನಾಥ ಕುಂದೇಶ್ವರವರಿಂದ 'ಹ್ವಾಯ್ ನಗಬೇಕು ಮಾರಾಯ್ರೆ' ಮಿಮಿಕ್ರಿ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 2ಕ್ಕೆ ರಘ ಪಾಡೇಶ್ವರ ಸಾರಥ್ಯದಲ್ಲಿ 'ಕುಂದಾಪ್ರದವ್ರ್ ನಾಟ್ಕ ಕಾಣಿ' ರಂಗ ಸನ್ನಿವೇಶಗಳು ಅನಾವರಣಗೊಳ್ಳಲಿದೆ, 3ಕ್ಕೆ ಚಾವಡಿ ಕಟ್ಟೆ 'ಬಸ್ರೂರು ಪಂಚಾತ್ಗಿ' ನಡೆಯಲಿದ್ದು, ಪಂಚಾಯಿತಿದಾರರಾಗಿ ಬಿ. ಅಪ್ಪಣ್ಣ ಹೆಗ್ಡೆ ಭಾಗವಹಿಸಲಿದ್ದಾರೆ. ವಾದಿ-ಪ್ರತಿವಾದಿಗಳಾಗಿ ನ್ಯಾಯವಾದಿ ಶ್ಯಾಮಲಾ ಭಂಡಾರಿ, ಉಪನ್ಯಾಸಕಿ ಭಾರತಿ ಮರವಂತೆ, ಕಲ್ಪನಾ ಭಾಸ್ಕರ್, ಸ್ಪೂರ್ತಿಧಾಮದ ನಿರ್ದೇಶಕ ಕೇಶವ್ ಕೋಟೇಶ್ವರ,  ಪತ್ರಕರ್ತ ಸುಬ್ರಮಣ್ಯ ಪಡುಕೋಣೆ, ಸ್ಪಂದನ ಚಾನೆಲ್ ನ ನಿರೂಪಕ ಅವಿನಾಶ್ ಕಾಮತ್ ಭಾಗವಹಿಸಲಿದ್ದು ಅಂತರಾಪ್ಟ್ಷಿಯ ಖ್ಯಾತಿಯ ಜಾದೂಗಾರ್ ಓಂ ಗಣೇಶ್ ನಿರ್ದೇಶನ ಮಾಡಲಿದ್ದಾರೆ.
       ಸಂಜೆ 4ಕ್ಕೆ ದುಂಡಿರಾಜರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಸಚಿವ ಕೋಟ ಶ್ರಿನಿವಾಸ್ ಪೂಜಾರಿ, ಸಂಸದ ಜಯಪ್ರಕಾಶ್ ಹೆಗ್ಡೆ, ಚಿತ್ರನಟ ಕಾಶಿನಾಥ, ತಾಲೂಕು ಕಸಾಪ ಅಧ್ಯಕ್ಷ ನಾರಾಯಣ ಖಾರ್ವಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com