ಕೃಷಿಯಿಂದ ಸ್ವಾವಲಂಬಿ ಬದುಕು ಸಾಧ್ಯ: ಶ್ರೀ ಭಟ್ಟಾರಕಚಾರುಕೀರ್ತಿ ಸ್ವಾಮೀಜಿ

ಬಸ್ರೂರು: ಸ್ವಾವಲಂಭಿ ಬದುಕುನ್ನು ಕಟ್ಟಿಕೊಳ್ಳಲು ಕೃಷಿ ಎಲ್ಲಾ ವಿಧದಲ್ಲೂ ಸಹಕಾರಿಯಾಗುತ್ತದೆ. ಇಲ್ಲಿ ತೊಡಗಿಕೊಂಡವರಿಗೆ ಕೊರತೆಯೆನ್ನುವುದಿರುವುದಿಲ್ಲ. ಕಷ್ಟ-ಸಹಿಷ್ಣುಗಳಾಗಿ ದುಡಿದಲ್ಲಿ ನೆಮ್ಮದಿಯ ಜೀವನ ನಡೆಸಬಹುದು ಎಂದು ಮೂಡುಬಿದಿರೆ ಜೈನಮಠದ ಶ್ರೀ ಭಟ್ಟಾರಕಚರುಕೀರ್ತಿ ರ್ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು. 
           ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ಧಿ ಯೋಜನೆ ಹಾಗೂ ಕೃಷಿ ಉತ್ಸವ ವ್ಯವಸ್ಥಾಪನಾ ಸಮೀತಿ ಇವರ ಜಂಟಿ ಆಶ್ರಯದಲ್ಲಿ ಬಸ್ರೂರು ಶ್ರೀ ಶಾರದಾ ಕಾಲೇಜು ಮೈದಾನ ಆಯೋಜಿಸಲಾಗಿದ್ದ ಕುಂದಾಪುರ ತಾಲೂಕು ಮಟ್ಟದ ಕೃಷಿ ಉತ್ಸವ-2013 ಉದ್ಘಾಟನಾ ಸಮಾರಂಭದಲ್ಲಿ ಆಶಿರ್ವಚಿಸಿ ಮಾತನಾಡುತ್ತಿದ್ದರು.
      ಯಂತ್ರಗಳ ಕೆಲಸ ಕಡಿಮೆ ಮಾಡಿ ಯುವಕರನ್ನು ಹೆಚ್ಚು ದುಡಿಸಿಕೊಂಡು ನಿರುದ್ಯೋಗ ಸಮಸ್ಯೆ ಕಡಿಮೆ ಮಾಡಬಹುದು. ಪಠ್ಯ ಕ್ರಮದಲ್ಲೂ ಕೃಷಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು ಎಂದರು.
           ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಣಿಪಾಲ್ ಭಾರತೀಯ ವಿಕಾಸ್ ಟ್ರಸ್ಟ್ ನ ಮ್ಯಾನೆಂಜಿಂಗ್ ಟ್ರಸ್ಟಿ ಕೆ. ಎಂ. ಉಡುಪ ಗ್ರಾಮಾಭೀವೃದ್ಧಿ ಸಂಘಟನೆಗಳಿಂದಾಗಿ ಕೃಷಿಯ ಮಹತ್ವ ಅರಿವಾಗುತ್ತಿದೆ. ದೇಶದಲ್ಲಿ ಕೃಷಿಗೆ ಉತ್ತಮ ಸಹಕಾರವಿದೆ ಎಂದರು. 
          ಬಸ್ರೂರು ಕೃಷಿ ಉತ್ಸವ ವ್ಯವಸ್ಥಾಪನಾ ಸಮೀತಿ ಅಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ಧಿ ಯೋಜನೆ ಉಡುಪಿ ಜಿಲ್ಲೆಯ ನಿರ್ದೇಶಕ ದುಗ್ಗೇಗೌಡ, ಕುಂದಾಪುರ ತಾಲೂಕು ಪಂಚಾಯತ್ ಅಧ್ಯಕ್ಷೆ ದೀಪಿಕಾ ಶೆಟ್ಟಿ, ಬಸ್ರೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಂಕರ್ ಮೆಂಡನ್, ಕುಂದಾಪುರ ತಾಲೂಕು ಪ್ರಗತಿಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಸತೀಶ್ ಹೆಗ್ಡೆ,   ಕುಂದಾಪುರದ ಯೋಜನಾಧಿಕಾರಿ ಹೇಮಲತಾ ಹೆಗ್ಡೆ ಉಪಸ್ಥಿತರಿದ್ದರು. ಚಂದ್ರವತಿ ಶೆಟ್ಟಿ ಮತ್ತು ಪ್ರತಾಪಚಂದ್ರ ಶೆಟ್ಟಿ ಹಳ್ನಾಡು ಕಾರ್ಯಕ್ರಮ ನಿರೂಪಿಸಿ, ಉಮೇಶ್ ಶೆಟ್ಟಿ ವಂದಿಸಿದರು.
          ಕೃಷಿಯ ಜೀವನಾಡಿ ಹೈನುಗಾರಿಕೆ, ಕುಟುಂಬ ಮತ್ತು ಮಹಿಳೆ ಹಾಗೂ ಕೃಷಿ ಮತ್ತು ಯುವಜನತೆ  ಎಂಬ ವಿಚಾರವಾಗಿ ವಿಚಾರಗೋಷ್ಠಿಗಳು ನಡೆದವು.
       ವಿವಿಧ ಪ್ರಾತ್ಯಕ್ಷಿತೆಗಳು, ಶ್ವಾನ ಪ್ರದರ್ಶನ, ಜಾನುವಾರುಗಳ ಪ್ರದರ್ಶನ, ವಿವಿಧ ಪಕ್ಷಿ ಪ್ರದರ್ಶನ, ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಹಾಗೂ ಮಾರಟ, ಸಾಂಸ್ಕೃತಿಕ ತಂಡಗಳ ಮೇರಗು ಕೃಷಿ ಮೇಳದಲ್ಲಿ ವಿಷೇಶವಾಗಿತ್ತು. 


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com