ಉಪ್ಪುಂದ: ನಮ್ಮ ಮನೆಗಳು ದೊಡ್ಡದಿವೆ ಆದರೆ ಮನಸ್ಸು ಸಣ್ಣದಾಗುತ್ತಿದೆ. ವಿಷಯ ಸಂಗ್ರಹ ಹೆಚ್ಚಾಗಿದೆ ವಿವೇಚನೆ ಕಡಿಮೆಯಾಗಿದೆ ಆರ್ಥಿಕ ಸ್ಥಿತಿ ಸುಧಾರಿಸಿದೆ ಆದರೆ ನೈತಿಕತೆ ಕುಸಿದಿದೆ ಇವೆಲ್ಲವನ್ನು ಸರಿದೂಗಿಸಲು ನಾವು ಬದಲಾಗಬೇಕಾಗಿದೆ ಎಂದು ಉಪ್ಪುಂದ ಜೇಸಿಐನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವೈ .ಮಂಗೇಶ ಶಾನುಭಾಗ್ ಹೇಳಿದರು.
ಅವರು ಶಂಕರ ಕಲಾಮಂದಿರದಲ್ಲಿ ನಡೆದ ಜೇಸಿ ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ಯು ಪ್ರಕಾಶ್ ಭಟ್ಟರಿಗೆ ಸನ್ಮಾನಿಸಲಾಯಿತು.
ವಲಯ ಉಪಾಧ್ಯಕ್ಷ ಎಂ ರತ್ನಾಕರ ಇಂದ್ರಾಳಿ ಪದಗ್ರಹಣ ಅಧಿಕಾರಿಯಾಗಿ ಉಪಸ್ಥಿತರಿದ್ದರು. ಕುಂದಾಪುರ ಕುಂದೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಡಾ. ಎಚ್ ವಿ ನರಸಿಂಹ ಮೂರ್ತಿ, ಪೂರ್ವ ವಲಯಾಧ್ಯಕ್ಷ ಸುಕುಮಾರ್, ಯೋಗ ಶಿಕ್ಷಕ ತುಕಾರಾಂಜೀ ಉಪಸ್ಥಿತರಿದ್ದರು. ನಿಕಟಪೂರ್ವ ಅಧ್ಯಕ್ಷ ಯು ಪ್ರಕಾಶ ಭಟ್ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು. ನೂತನ ಕಾರ್ಯಕಾರಿಣಿಯಲ್ಲಿ ಕಾರ್ಯದರ್ಶಿಯಾಗಿ ಗುರುರಾಜ್ ಹೆಬ್ಬಾರ್, ಜೇಸಿರೇಟ್ ಅಧ್ಯಕ್ಷೆಯಾಗಿ ಶ್ರೀಮತಿ ಗೌರಿ ಮಂಗೇಶ, ಜ್ಯೂನಿಯರ್ ಜೇಸಿ ಅಧ್ಯಕ್ಷರಾಗಿ ಗುರುಪ್ರಸಾದ್ ನಾಯಕ್ ಆಯ್ಕೆಯಾದರು.
ಕುಂದಾಪ್ರ ಡಾಟ್ ಕಾಂ - editor@kundapra.com