ಜೆ.ಸಿ.ಐ. ಶಿರೂರು- ಪದಗ್ರಹಣ ಹಾಗೂ ನೃತ್ಯ ವೈಭವ


 ಶಿರೂರು: ಜೆ.ಸಿ.ಐ. ಶಿರೂರು ಘಟಕದ 2013ನೇ ಸಾಲಿನ ಪದಗ್ರಹಣ ಹಾಗೂ ನೃತ್ಯ ವೈಭವ ಕಾರ್ಯಕ್ರಮ ಶಿರೂರು ಪೇಟೆ ವೆಂಕಟರಮಣ ಸಭಾಭವನದಲ್ಲಿ ನಡೆಯಿತು.
      ಮುಖ್ಯ ಅತಿಥಿಯಾಗಿ ಉಡುಪಿ ಹನುಮಾನ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಪಿ. ವಿಲಾಸ ನಾಯಕ್ ಉಪಸ್ಥಿತರಿದ್ದರು. ಪದಗ್ರಹಣ ಕಾರ್ಯಕ್ರಮವನ್ನು ರತ್ನಾಕರ ಇಂದ್ರಾಳಿ  ನೆರವೇರಿಸಿದರು. ಜೆ.ಸಿ. ವಲಯ ಪೂರ್ವಾಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಜೆ.ಸಿ.ಐ. ಶಿರೂರು ಸ್ಥಾಪನಾಧ್ಯಕ್ಷ ಮೋಹನ್ ರೇವಣ್ ಕರ್, ನೂತನ ಅಧ್ಯಕ್ಷ ಪ್ರಸಾದ್ ಪ್ರಭು, ಜೇಸಿರೆಟ್ ಅಧ್ಯಕ್ಷ ಜಾನ್ವಿ ಪ್ರಸಾದ್ ಪ್ರಭು, ಜೂನಿಯರ್ ಜೆ.ಸಿ.ಐ.ನ ಶಾಂತಾನಂದ ಪೂಜಾರಿ, ಕಾಶಿನಾಥ ಮೇಸ್ತ, ಈರಮ್ಮ ಪೂಜಾರಿ ವೇದಿಕೆಯಲ್ಲಿ  ಉಪಸ್ಥಿತರಿದ್ದರು. 
            ಈ ಸಂದರ್ಭದಲ್ಲಿ  ನೂತನ ಜೆ.ಸಿ.ಐ. ಸದಸ್ಯರನ್ನು ಸೇರ್ಪಡೆ ಮಾಡಿಕೊಳ್ಳಲಾಯಿತು. ಪ್ರಕಾಶ್ ಮಾಕೋಡಿ ಸ್ವಾಗತಿಸಿ ಅರುಣ್ ಕುಮಾರ್ ಶಿರೂರು ವಂದಿಸಿದರು. ಬಳಿಕ ರಾಜ್ಯಮಟ್ಟದ ನೃತ್ಯ ಕಲಾವಿದರಿಂದ ನೃತ್ಯ ವೈಭವ ಕಾರ್ಯಕ್ರಮ ನಡೆಯಿತು.

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com