ಭಂಡಾರ್ಕಾರ್ಸ್: ಅಂತರ್ ಕಾಲೇಜು ವಾಲಿಬಾಲ್ ಟೂರ್ನ್ ಮೆಂಟ್ ಉದ್ಘಾಟನೆ


ಕುಂದಾಪುರ: ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಶುಕ್ರವಾರ ಮಂಗಳೂರು ಯುನಿವರ್ಸಿಟಿಯ ಅಂತರ್ ಕಾಲೇಜು ವಾಲಿಬಾಲ್ ಟೂರ್ನಮೆಂಟ್ ಕುಂದಾಪುರ ಪುರ ಸಭೆಯ ಸದಸ್ಯ ರಾಜೇಶ್ ಕಾವೇರಿ ಉದ್ಘಾಟಿಸಿದರು. 
         ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಯುನಿವರ್ಸಿಟಿಯ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಹೆಚ್. ನಾಗಲಿಂಗಪ್ಪ ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಡಾ. ಹೆಚ್. ಶಾಂತರಾಮ್  ಅಧ್ಯಕ್ಷತೆ ವಹಿಸಿದ್ದರು. ಪದವಿ ಕಾಲೇಜಿನ ಪ್ರಾಂಶುಪಾರಾದ ದೋಮ ಚಂದ್ರಶೇಖರ, ಅತಿಥಿ ಚಂದ್ರ ಶೇಖರ ಶೆಟ್ಟಿ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ನಿರ್ದೇಶಕ ಶಂಕರನಾರಾಯಣ ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಿ.ಎಂ.ಗೊಂಡಾ ವಂದಿಸಿದರು. ರಾಘವೇಂದ್ರ ಕಾರ್ಯಕ್ರಮ ನಿರ್ವಹಿಸಿದರು


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com