ಗಂಗೊಳ್ಳಿ ಮೀನುಗಾರರ ಕಾರ್ಮಿಕ ಸಂಘ, ಕೇಂದ್ರ ಕಾರ್ಮಿಕ ಸಚಿವರ ಭೇಟಿ


ಗಂಗೊಳ್ಳಿ: ಇಲ್ಲಿನ ಮೀನುಗಾರರ ಕಾರ್ಮಿಕ ಸಂಘದ ನಿಯೋಗವು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿತು.

ಗಂಗೊಳ್ಳಿ ಬಂದರಿನಲ್ಲಿ ಸಂಭವಿಸುವ ಬೋಟ್ ಅವಘಡಗಳನ್ನು ತಡೆಯಲು ತಡೆಗೋಡೆ ನಿರ್ಮಿಸಬೇಕೆಂದು ನಿಯೋಗ ಆಗ್ರಹಿಸಿತು. ಕೇಂದ್ರ ಕಾರ್ಮಿಕ ಇಲಾಖೆ ಅಸಂಘಟಿತ ಕಾರ್ಮಿಕರಿಗೆ ಜಾರಿ ತಂದಿರುವ ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಯನ್ನು ಗಂಗೊಳ್ಳಿ ಬಂದರಿನಲ್ಲಿ ಮೀನುಗಾರಿಕಾ ವೃತ್ತಿ ಮಾಡುತ್ತಿರುವ ಕಾರ್ಮಿಕರಿಗೆ ಅನುವಾಗುವಂತೆ ಮಾಡಬೇಕು ಎಂದುಮನವಿ ಮಾಡಿಕೊಂಡರು.
 12 ಪ್ರಮುಖ ಬೇಡಿಕೆಗಳ ಮನವಿಯನ್ನು ಸಚಿವರಿಗೆ ಸಲ್ಲಿಸಲಾಯಿತು. ಮನವಿಗೆ ಸ್ಪಂದಿಸಿದ ಸಚಿವರು ಭರವಸೆ ಈಡೇರಿಸುವುದಾಗಿ ತಿಳಿಸಿದರು. ಇದೇ ಸಂದರ್ಭ ಸಚಿವರನ್ನು ಗಂಗೊಳ್ಳಿ ಮೀನುಗಾರಿಕಾ ಕಾರ್ಮಿಕ ಸಂಘದ ಸ್ಥಾಪಕಾಧ್ಯಕ್ಷ ಅನಂತ ಖಾರ್ವಿ ಸನ್ಮಾನಿಸಿದರು.
ಸಂಘದ ಉಪಾಧ್ಯಕ್ಷ ರಾಮ ಖಾರ್ವಿ, ಕಾರ್ಯದರ್ಶಿ ಭಾಸ್ಕರ ಖಾರ್ವಿ, ಸಹ ಕಾರ್ಯದರ್ಶಿ ನರಸಿಂಹ ಮೊಗೇರ, ಕೋಶಾಧಿಕಾರಿ ಭಾಸ್ಕರ ಶ್ರೇಯಾನ್, ಸಹ ಕೋಶಾಧಿಕಾರಿ ಎಂ. ನಾಗರಾಜ ಖಾರ್ವಿ, ಕಾರ್ಯಕಾರಿ ಸಮಿತಿ ಸದಸ್ಯರಾದ ರತ್ನಾಕರ ಕುಂದರ್, ಗೋಪಾಲ ಮರಕಾಲ, ಮಂಜುನಾಥ ಖಾರ್ವಿ, ಪ್ರಭಾಕರ ಖಾರ್ವಿ, ರಾಮಕೃಷ್ಣ ಖಾರ್ವಿ, ರಾಮದಾಸ ಖಾರ್ವಿ, ಶೇಖರ ಶ್ರೇಯಾನ್, ನಾರಾಯಣ ಖಾರ್ವಿ ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com