ಕುಂದಾಪುರ: ಇಲ್ಲಿನ ಸಹಮತ ಹಾಗೂ ಬದುಕು ಬಳಗ ಪ್ರಸ್ತುತಪಡಿಸುತ್ತಿರುವ 'ಗಾಂಧಿ ಸ್ಮೃತಿ' ಕಾರ್ಯಕ್ರಮವು ಕುಂದಾಪುರದ ಜ್ಯೂನಿಯರ್ ಕಾಲೇಜು ಕಲಾಮಂದಿರದಲ್ಲಿ ಫೆ. 3 ರಂದು ಸಂಜೆ 5:30ಕ್ಕೆ ನಡೆಯಲಿದೆ.
ಕಾರ್ಯಕ್ರಮವನ್ನು ಕುಂದಾಪುರ ರೋಟರಿ ದಕ್ಷಿಣದ ಅಧ್ಯಕ್ಷ ವಿವಿಯನ್ ಕ್ರಾಸ್ಟೊ ಉದ್ಘಾಟಿಸಲಿದ್ದಾರೆ. ವಲೇರಿಯನ್ ಮಿನೆಜಸರವರ ಆಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ಇತಿಹಾಸ ವಿಭಾಗದ ನಿವೃತ್ತ ಪ್ರಾಧ್ಯಾಪಕ ಬಿ. ಸುರೇಂದ್ರ ರಾವ್ ಪ್ರಧಾನ ಆಶಯ ಭಾಷಣ ಮಾಡಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
ಸಭಾ ಕಾರ್ಯಕ್ರಮದ ಬಳಿಕ ಕುಂದಾಪುರದ ಆವಿನಾಶ್ ಹೆಬ್ಬಾರ್ ಇವರಿಂದ ಸಿತಾರ್ ವಾದನವಿದೆ.