ಕುಂದಾಪುರದಲ್ಲಿ ಗಣಕೀಕೃತ ರೈಲ್ವೆ ಮುಂಗಡ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಆರಂಭ

ಕುಂದಾಪುರ: ಕುಂದಾಪುರದ ಪ್ರಧಾನ ಅಂಚೆ ಕಚೇರಿಯಲ್ಲಿ ಕುಂದಾಪುರದಲ್ಲಿ ಭಾರತೀಯ ಅಂಚೆ ಇಲಾಖೆ ಹಾಗೂ ಕೊಂಕಣ ರೈಲ್ವೆ ಜಂಟಿಯಾಗಿ ಪ್ರಾರಂಭಿಸಿದ ಗಣಕೀಕೃತ ರೈಲ್ವೆ ಮುಂಗಡ ಟಿಕೆಟ್ ಬುಕ್ಕಿಂಗ್ ಸೇವಾ ಕೌಂಟರ್ ಅನ್ನು ಉಡುಪಿ- ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೆ. ಜಯಪ್ರಕಾಶ ಹೆಗ್ಡೆ ಉದ್ಘಾಟಿದರು.
      ಕುಂದಾಪುರ ಪುರಸಭಾಧ್ಯಕ್ಷ ಕೆ.ಮೋಹನದಾಸ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ವಿಭಾಗದ ಅಂಚೆ ಅಧೀಕ್ಷಕ ರಾಜಶೇಖರ್ ಭಟ್, ರೈಲ್ವೇ ಸಹಾಯಕ ವಾಣಿಜ್ಯ ವ್ಯವಸ್ಥಾಪಕ ಸುನೀಲ್ ಬಿ.ನಾರ್ಕರ್, ಸಂತೋಷ ಶಿತುರಕರ್ ಅತಿಥಿಗಳಾಗಿದ್ದರು. ಅಂಚೆ ಇಲಾಖೆಯ ವೀಣಾ ಪ್ರಾರ್ಥಿಸಿದರು. ರೈಲ್ವೆ ಇಲಾಖೆಯ ಹಿರಿಯ ವಾಣಿಜ್ಯ ನಿರೀಕ್ಷಕ ನಾಗಾಪತಿ ಹೆಗಡೆ ನಿರೂಪಿಸಿದರು, ಕುಂದಾಪುರ ಅಂಚೆ ಕಚೇರಿ ಮಾರುಕಟ್ಟೆ ಅಧಿಕಾರಿ ಎಚ್.ಕೆ.ಭಾಸ್ಕರ್ ಶೆಟ್ಟಿ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com