ಅವರು ಸುವರ್ಣ ಸಂಭ್ರವನ್ನಾಚರಿಸಿಕೊಳ್ಳುತ್ತಿರುವ ಭಂಡಾರ್ಕಾರ್ಸ್ ಕಾಲೇಜಿನ ಆರ್. ಎನ್. ಶೆಟ್ಟಿ ಸಭಾಂಗಣದಲ್ಲಿ ಡಾ. ಹೆಚ್.ಶಾಂತಾರಾಮ್ ಸಾಹಿತ್ಯ ಮತ್ತು ಸಂಸ್ಕೃತಿ ವೇದಿಕೆ ಭಂಡಾರ್ಕಾರ್ಸ್ ಕಾಲೇಜು ಹಾಗೂ ಮಿತ್ರ ಮಂಡಳಿ ಕೋಟ ಇವರ ಸಹಭಾಗಿತ್ವದಲ್ಲಿ ಡಾ| ಕೋಟ ಶಿವರಾಮ ಕಾರಂತರ ನೆನಪಿನಲ್ಲಿ ಆಯೋಜಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಹದಿನೇಳನೆಯ ಕಾಲೇಜು ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಆಧುನಿಕತೆಗೆ ಒಗ್ಗಿಕೊಂಡಿರುವ ನಾವು ಇಂದು ಕೊಮುವಾದ, ಉದಾರಿಕರಣ, ಖಾಸಗೀಕರಣ, ಜಾಗತಿಕರಣದಂತಹ ಸಂಕಷ್ಟಗಳ ಸುಳಿಯಲ್ಲಿ ಸಿಲುಕಿಕೊಂಡಿದ್ದೆವೆ. ಇದೊಂದು ಜಾಗೃತಿ ಪ್ರಜ್ಞೆಯನ್ನು ಬಡಿದೆಬ್ಬಿಸುವ ಅತ್ಯಾಚಾರ ಪ್ರಕರಣಗಳು ದುರಂತವಾಗಿ ಕಾಡಿತು. ಸಮಾಜಕ್ಕೆ ಸವಾಲು ಎಲ್ಲಾ ಕಾಲದಲ್ಲೂ ಇತ್ತು. ಎನ್ನಲನ್ನೂ ವೀರಿ ಮುಂದಿನ ದಿನಗಳನ್ನು ಸಮರ್ಥವಾಗಿ ನಿಭಾಯಿಸುವ ಜವಾಬ್ದಾರಿ ನಮ್ಮ ಮೇಲಿದೆ. ಸಾಹಿತ್ಯಕ್ಕೆ ಮನುಷ್ಯನ ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಇದೆ. ಸಾಹಿತ್ಯ ಕೇವಲ ಭಾಷೆಯಲ್ಲ. ಅದು ನಮ್ಮ ಸಂಪೂರ್ಣ ಜೀವನ ವಿಧಾನ. ಸಾಹಿತ್ಯ ತನ್ನ ಸುತ್ತಲಿನ ಆಚಾರ-ವಿಚಾರಗಳನನ್ನು, ಸಂಸ್ಕ್ರತಿಯನ್ನು ಚಿತ್ರಿಸುವಾಗ ಕಲೆಗೂ ನೀತಿಗೂ ಸಂಬಂಧವಿಲ್ಲ ಎನ್ನುವುದು ಸರಿಯಲ್ಲ ಎಂದರು.

ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕಲಾನಿಕಾಯದ ಡೀನ್ ಪ್ರೊ. ಕೆ.ಅಭಯ್ ಕುಮಾರ್ ಜನಪದ ಮತ್ತು ಶಿಷ್ಟ ಪರಂಪರೆಯಲ್ಲಿ ಆದಿಕವಿಗಳಾದ ಪಂಪ, ರನ್ನ , ಜನ್ನ ಮತ್ತು ಬಸವಣ್ಣ ಮುಂತಾದವರ ಸಾಹಿತ್ಯಗಳು ಇನ್ನೊಬ್ಬರ ಸಾಹಿತ್ಯ ರಚನೆ ಮತ್ತು ಬೆಳವಣಿಗೆಗೆ ಪ್ರೇರಣೆಯಾಗುತ್ತಿದ್ದವು. ಅವರ ಸಾಹಿತ್ಯಗಳು ಬದುಕಿನ ಅನುಭವಗಳನ್ನು ತಿಳಿಸಿ ಸಂಸ್ಕಾರವನ್ನು ಕಲಿಸುತ್ತಿದ್ದವು. ಈಗಲೂ ಸಾಹಿತ್ಯ ರಚನೆಗಳು ಸಾಮಾಜಿಕ ಬದಲಾವಣೆಗೆ ಕಾರಣವಾಗಿದೆ. ಜ್ಞಾನಕ್ಕೆ ಯಾವುದೇ ಬಂಧನವಿರಬಾರದು. ಕಾಲ ಬದಲಾದಂತೆ ಮೌಲ್ಯಗಳು ಬದಲಾಗುತ್ತವೆ. ಅದನ್ನು ಅರಿತುಕೊಂಡು ನಡೆಯುವುದು ಅವಶ್ಯಕ. ಬಾಲ್ಯದಿಂದಲೇ ಸಂಸ್ಕೃತಿ ಮತ್ತು ಸಾಹಿತ್ಯದ ಬಗ್ಗೆ ಅಭಿರುಚಿ ಬೆಳೆಸಿಕೊಳ್ಳಬೇಕು. ಸಾಹಿತ್ಯ ಕೃತಿಗಳನ್ನು ಓದುವುದರಿಂದ ಜ್ಞಾನ ವೃದ್ಧಿಗೊಳ್ಳುವುದಲ್ಲದೆ ನೈತಿಕಮೌಲ್ಯಗಳ ಅರಿವಾಗುತ್ತದೆ. ಆದ್ದರಿಂದ ಇಂತಹ ಸಾಹಿತ್ಯ ಸಮ್ಮೇಳನಗಳು ಅನಿವಾರ್ಯ ಮತ್ತು ಅತಿಮುಖ್ಯ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಆಡಳಿತಾಧಿಕಾರಿಗಳಾದ ಡಾ.ಹೆಚ್.ಶಾಂತಾರಾಮ್ ಮಾತನಾಡಿ ಸಾಹಿತ್ಯ ಮನೋಲ್ಲಾಸ ಹಾಗೂ ಬುದ್ಧಿಮತ್ತೆಯನ್ನು ಹೆಚ್ಚಿಸುತ್ತದೆ. ಬಹುಮುಖ್ಯವಾಗಿ ಮಾನವೀಯ ಗುಣ ಹಾಗೂ ನೈತಿಕತೆಯನ್ನು ಅರಿತುಕೊಳ್ಳಲು ಸಾಹಿತ್ಯ ಸಹಾಯಕವಾಗುತ್ತದೆ ಎಂದರು
ಕಾಲೇಜಿನ ಪ್ರಾಂಶುಪಾಲ ಪ್ರೊ. ಚಂದ್ರಶೇಖರ ದೋಮ, ಉಡುಪಿ ತಾಲೂಕು ಕ.ಸಾ.ಪ ಅಧ್ಯಕ್ಷ ಸಿ. ಉಪೇಂದ್ರ ಸೋಮಾಯಾಜಿ ಉಪಸ್ಥಿತರಿದ್ದರು.

ಉಪನ್ಯಾಸಕಿ ಪ್ರೊ. ರೇಖಾ ಬನ್ನಾಡಿ ಸ್ವಾಗತಿಸಿ, ಪಾರಂಪಳ್ಳಿ ನರಸಿಂಹ ಐತಾಳ ವಂದಿಸಿದರು. ವಿದ್ಯಾರ್ಥಿನಿ ಅರ್ಚನಾ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ನಡೆದ ಪ್ರಬಂಧಗೋಷ್ಠಿಯ ಅಧ್ಯಕ್ಷತೆಯನ್ನು ಕಾರ್ಕಳದ ಸರಕಾರಿ ಪ್ರಥಮ ದರ್ಜೆ ಕಾಲೆಜಿನ ತೃತೀಯ ಬಿ.ಬಿ.ಎಂ ವಿದ್ಯಾರ್ಥಿ ಶ್ರೀ ಸಂದೇಶ ಇಂದ್ರ ವಹಿಸಿದ್ದರು. ಭಂಡಾರ್ಕಾರ್ಸ್ ಕಾಲೇಜಿನ ಕುಮಾರಿ ಶ್ವೇತಾಶ್ರೀ ಮರಳಿ ಮಣ್ಣಿಗೆ ಕಾದಂಬರಿಯಲ್ಲಿ ಕೌಟುಂಬಿಕ ಜೀವನ ಮತ್ತು ಉಡುಪಿಯ ಎಂ.ಜಿ.ಎಂ. ಕಾಲೇಜಿನ ಶ್ರೀ ರಾಮಾಂಜಿ ಅವರ ಮರಳಿ ಮಣ್ಣಿಗೆ ಕಾದಂಬರಿಯಲ್ಲಿ ಜಾಗತೀಕರಣ ಎಂಬ ವಿಷಯಗಳ ಕುರಿತು ಪ್ರಬಂಧ ಮಂಡಿಸಿದರು.
ನಂತರ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡು ಇಲ್ಲಿನ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿ ಕುಮಾರಿ ಮೈತ್ರೇಯಿ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡಯಯಿತು. ಪುತ್ತೂರಿನ ವಿವೇಕಾನಂದ ಕಾಲೇಜಿನ ದ್ವಿತೀಯ ಬಿ.ಎ ವಿದ್ಯಾರ್ಥಿನಿ ಸುಚಿತ್ರಾಕುಮಾರಿ, ಕುಂದಾಪುರದ ಡಾ.ಬಿ.ಬಿ.ಹೆಗ್ಡೆ ಕಾಲೇಜಿನ ಮಹಾದೇವ ಮಯ್ಯ ಮತ್ತು ಕು.ಮಾರಿ ವಿದ್ಯಾವತಿ, ಡಾ.ಎ.ವಿ.ಬಾಳಿಗ ಕಾಲೇಜು, ಹಾರಾಡಿಯ ಕುಮಾರಿ ಚೈತ್ರ, ಕಾರ್ಕಳದ ಸರಕಾರಿ ಪ್ರಥಮ ದರ್ಜೆ ಕಾಲೆಜಿನ ತೃತೀಯ ಬಿ.ಬಿ.ಎಂ ವಿದ್ಯಾರ್ಥಿ ಸಂದೇಶ ಇಂದ್ರ ಬಿ.ಜೆ ಮತ್ತು ಮಂಗಳಗಂಗೋತ್ರಿಯ ಕನ್ನಡ ಅಧ್ಯಯನ ಕೇಂದ್ರದ ದ್ವಿತೀಯ ಎಂ.ಎ ವಿದ್ಯಾರ್ಥಿ ಶ್ರೇಯಾಂಕ ಎನ್.ಕಾನಡೆ ಉಪಸ್ಥಿತರಿದ್ದರು.