ಕಾವ್ಯದಿಂದ ಮಾನವೀಯ ಅಂತಃಶಕ್ತಿ ಜಾಗೃತಗೊಳ್ಳಲಿ: ಚಂದ್ರ ಹೆಮ್ಮಾಡಿ


ಕುಂದಾಪುರ:   ಮಗುವಿನ ಮುಗ್ಧತೆ, ಬೆರಗುಕಂಗಳ ಕುತೂಹಲ, ಚಿಮ್ಮುವ ಜೀವನೋತ್ಸಾಹ, ಪ್ರಕೃತಿಪ್ರೇಮ, ನಿರಂತರ ತುಡಿತ, ನವಿರಾದ ಹಾಸ್ಯಪ್ರಜ್ಞೆ, ಜೀವನ್ಮುಖಿ ಚಿಂತನೆ ಹಾಗೂ ಎಲ್ಲ ವಿದ್ಯಮಾನಗಳಿಗೆ ಕಣ್ಣಾಗುವ, ಕಿವಿಯಾಗುವ ಮನೋಭಾವದ ಮೂಲಕ ಕವಿಹೃದಯ ಸಹೃದಯವಾಗಬೇಕು. ಕಾವ್ಯಗುಣದಿಂದ ತಮ್ಮ ಅಂತಃಸತ್ವವನ್ನು ಫಲವತ್ತಾಗಿಸಿಕೊಂಡು ಮಾನವೀಯ ಅಂತಃಶಕ್ತಿಯನ್ನು ಜಾಗೃತಗೊಳಿಸಲು ಯುವಕವಿಗಳು ಪ್ರಯತ್ನಿಸಲಿ ಎಂದು ಯುವಕವಿ, ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ ಅವರು ಹೇಳಿದರು. 
  ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾ ಘಟಕ ಮತ್ತು ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು ಕನ್ನಡ ಸಂಘದ ಆಶ್ರಯದಲ್ಲಿ ಜನವರಿ 24ರಂದು ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ಜರಗಿದ ಸಂಕ್ರಾಂತಿ ಯುವಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತೋಚಿದ್ದು, ಗೀಚಿದ್ದೆಲ್ಲವೂ ಕವಿತೆ ಎಂಬ ಹುಂಬತೆಯನ್ನು ಬದಿಗಿರಿಸಿ ಸತತ ಅಧ್ಯಯನ, ಕಾವ್ಯಾಭ್ಯಾಸ, ಹಿರಿಯ ಅನುಭವೀ ಕವಿಗಳ ಒಡನಾಟದಿಂದ ಉತ್ತಮ ಸಂವೇದನೆ ಹಾಗೂ ಸೃಜನಾತ್ಮಕತೆ ಸೃಷ್ಟಿಶೀಲತೆಯನ್ನು ಹೊಂದಿದಾಗ ಮಾತ್ರ ಯುವಕವಿಗಳಿಂದ ಶ್ರೇಷ್ಠ ಸಾಹಿತ್ಯ ರಚನೆಯಾಗಲು ಸಾಧ್ಯ ಎಂದರು.
  ಕವಿಗೋಷ್ಠಿ ಅಧ್ಯಕ್ಷ ಸೇರಿದಂತೆ ಯುವಕವಿಗಳಾದ ಶೇಖರ ದೇವಾಡಿಗ ಬೈಂದೂರು, ರಾಘವೇಂದ್ರ ಕೆ., ಮನು ಎಂ., ಮೈತ್ರೇಯಿ, ರಾಧಿಕಾ, ಅಶ್ವಿನಿ, ಲಕ್ಷ್ಮೀ, ಶ್ವೇತಾ, ವೀಣಾ ತುಂಗ ಕೋಟ, ಸಂಗೀತಾ ಎಸ್., ದೇವದಾಸ್ ಕೆರೆಮನೆ, ದೀಪಾ ಆರ್. ಕಾಮತ್, ಅಲ್ತಾರು ನಾಗರಾಜ್ ಪೂಜಾರಿ, ನಾಗರಾಜ ಗುಳ್ಳಾಡಿ, ಧನಂಜಯ, ಗೌರವ ಶೆಟ್ಟಿ, ತಾರಾನಾಥ ಜೆ. ಮೇಸ್ತ ಶಿರೂರು, ಚೈತ್ರ, ಪವಿತ್ರ ಶೆಟ್ಟಿ, ನವೀನ್ ಜಿ. ಬಡಾಕೆರೆ ಹಾಗೂ ಶಕುಂತಳಾ ತಮ್ಮ ಕವನಗಳನ್ನು ವಾಚಿಸಿದರು. 
  ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಸಾಪ ಉಡುಪಿ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಉಪ್ಪುಂದ ಚಂದ್ರಶೇಖರ ಹೊಳ್ಳ, ಪ್ರಾಂಶುಪಾಲ ಡಾ. ನೇರಿ ಕನರ್ೇಲಿಯೋ, ಕಸಾಪ ಉಡುಪಿ ತಾಲೂಕು ಅಧ್ಯಕ್ಷ ಸಿ. ಉಪೇಂದ್ರ ಸೋಮಯಾಜಿ, ಯುವಕವಿಗೋಷ್ಠಿಯ ಅಧ್ಯಕ್ಷ ನಾರಾಯಣ ಮಡಿ, ಶಿತರ್ಾಡಿ ವಿಲಿಯಂ ಪಿಂಟೋ, ಸುಬ್ರಹ್ಮಣ್ಯ ಬಾಸ್ರಿ, ಗಣೇಶ್ಪ್ರಸನ್ನ ಮಯ್ಯ ಉಪಸ್ಥಿತರಿದ್ದರು.
  ಮಿಲಾಗ್ರಿಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ನಾರಾಯಣ ಎಂ. ಹೆಗಡೆ ಅವರು ಸ್ವಾಗತಿಸಿದರು. ವಿದ್ಯಾಥರ್ಿನಿ ಹೇಮಾ ಕಾರ್ಯಕ್ರಮ ನಿರ್ವಹಿಸಿದರು. ವಿ. ರಂಗಪ್ಪಯ್ಯ ಹೊಳ್ಳ ಅವರು ವಂದಿಸಿದರು. 


ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com