ಕುಂದಾಪುರ: ಶಿಕ್ಷಣದ ಮೂಲ ಉದ್ದೇಶ ಮಾನವಿಯತೆಯನ್ನು ಬೆಳೆಸುವುದಾಗಿದೆ. ಮಾನವೀಯ ಹಿನ್ನೆಲೆ ಹೊಂದಿರುವ ರಕ್ತದಾನದಿಂದ ಮತ್ತೊಂದು ಜೀವಕ್ಕೆ ಹೊಸ ಬದುಕು ಕೊಟ್ಟಂತಾಗುತ್ತದೆ ಎಂದು ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲದ ಇದರ ಆಡಳಿತಾಧಿಕಾರಿಗಳಾದ ಡಾ.ಹೆ.ಶಾಂತಾರಾಮ್ ಹೇಳಿದರು.
ಅವರು ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್, ಅಂಬಲಪಾಡಿ, ಉಡುಪಿ, ಮೊಗವೀರ ಯುವ ಸಂಘಟನೆ ಉಡುಪಿ ಮತ್ತು ಕುಂದಾಪುರ ಘಟಕ ಮತ್ತು ಲಯನ್ಸ್ ಕ್ಲಬ್ ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಜಿಲ್ಲಾಡಳಿತ ಉಡುಪಿ ಹಾಗೂ ಕೆ.ಎಂ.ಸಿ ಮಣಿಪಾಲ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಸಮಾಜದ ಒಳಿತಿಗಾಗಿ ನಡೆಯುವ ಇಂತಹ ಶಿಬಿರಗಳಿಂದ ಮಾನವೀಯ ಗುಣ ಬೆಳೆಯಲು ಸಾಧ್ಯವಾಗುತ್ತದೆ. ಪ್ರತಿವರ್ಷದಿಂದ ವರ್ಷಕ್ಕೆ ರಕ್ತದಾನದ ಸಂಖ್ಯೆ ಹೆಚ್ಚುತ್ತಿರುವುದು ಸಂತೋಷದ ಸಂಗತಿ. ನಿಸರ್ಗದ ನೀತಿಯಂತೆ ತನ್ನಲ್ಲಿರುವ ಶಕ್ತಿಯನ್ನು ಇನ್ನೊಬ್ಬರ ಒಳಿತಿಗಾಗಿ ಧಾರೆಯೆರೆಯುವ ಗುಣ ಎಲ್ಲರಲ್ಲೂ ಬೆಳೆಯಲಿ ಎಂದರು.
ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್(ರಿ), ಅಂಬಲಪಾಡಿ, ಉಡುಪಿ ಇದರ ಅಧ್ಯಕ್ಷರಾದ ಜಿ.ಶಂಕರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಚಂದ್ರಶೇಖರ ದೋಮ, ಕುಂದಾಪುರ ಲಯನ್ಸ್ ಕ್ಲಬ್ ಅಧ್ಯಕ್ಷ ಕಿಶನ್ ಕುಮಾರ್, ಉಡುಪಿ ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ಶ್ರೀ ಜಯ.ಸಿ ಕೋಟ್ಯಾನ್, ಕುಂದಾಪುರ ಘಟಕದ ಅಧ್ಯಕ್ಷರಾದ ಕೆ. ಸುರೇಶ ವಿಠಲವಾಡಿ, ಕೆ.ಎಂ.ಸಿ ಮಣಿಪಾಲ ಇಲ್ಲಿನ ಡಾ. ಸುಧಾ ಭಟ್ ಅತಿಥಿಗಳಾಗಿದ್ದರು.ಕಾಲೇಜಿನ ಎನ್.ಎಸ್.ಎಸ್ ಘಟಕದ ಸಂಯೋಜನಾಧಿಕಾರಿಗಳಾದ ಶ್ರೀ ಶಶಿಕಾಂತ್ ಹತ್ವಾರ್ ಮತ್ತು ಜಿ.ಎಂ.ಉದಯಕುಮಾರ್ ಉಪಸ್ಥಿತರಿದ್ದರು.
ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ.ಜಿ.ಎಂ.ಗೊಂಡ ಅವರು ಸ್ವಾಗತಿಸಿ. ವಿದ್ಯಾರ್ಥಿನಿ ಜಯಂತಿ ಕಾರ್ಯಕ್ರಮ ನಿರ್ವಹಿಸಿ, ರಮ್ಯ ವಂದಿಸಿದರು.