ಸಂಕ್ರಾಂತಿ ಯುವಕವಿಗೋಷ್ಠಿ ಉದ್ಘಾಟನೆ, ಭಾವದೀಪ್ತಿ ಕವನಸಂಕಲನ ಬಿಡುಗಡೆ

 ಕುಂದಾಪುರ:  ಸಾಹಿತ್ಯಾಸಕ್ತ ಯುವಜನರಿಗೆ ಉಪದೇಶ ನೀಡುವುದಕ್ಕಿಂತ ಅವರ ಸಾಹಿತ್ಯಿಕ ಬೆಳವಣಿಗೆ ಪ್ರೋತ್ಸಾಹ ನೀಡುವುದು ಬಹಳ ಮುಖ್ಯ. ಯುವಜನರಲ್ಲಿ ಸಾಹಿತ್ಯಾಸಕ್ತಿಯನ್ನು ಮೂಡಿಸಿ ಹೆಚ್ಚಿನ ಉತ್ತೇಜನವನ್ನು ನೀಡುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾ ಘಟಕವು ಹತ್ತುಹಲವು ಉತ್ತೇಜನಕಾರಿ ಕಾರ್ಯಕ್ರಮಗಳನ್ನು ರೂಪಿಸಿದ್ದು, ಸಂಕ್ರಾಂತಿ ಯುವಕವಿಗೋಷ್ಠಿಯಿಂದ ಜಿಲ್ಲೆಯ ಹಲವಾರು ಯುವಕವಿಗಳಿಗೆ ಅವಕಾಶ ಲಭಿಸಿದಂತಾಗಿದೆ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು ಹೇಳಿದರು. 
        ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾ ಘಟಕ ಮತ್ತು ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು ಕನ್ನಡ ಸಂಘದ ಆಶ್ರಯದಲ್ಲಿ ಜನವರಿ 24ರಂದು ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ಜರಗಿದ ಸಂಕ್ರಾಂತಿ ಯುವಕವಿಗೋಷ್ಠಿ ಹಾಗೂ ಭಾವದೀಪ್ತಿ ಕವನಸಂಕಲನ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
       ಮುಖ್ಯ ಅತಿಥಿ ಕಸಾಪ ಉಡುಪಿ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಉಪ್ಪುಂದ ಚಂದ್ರಶೇಖರ ಹೊಳ್ಳ ಅವರು ಮಿಲಾಗ್ರಿಸ್ ಕಾಲೇಜಿನ ವಿದ್ಯಾಥರ್ಿ ಯುವಕವಯಿತ್ರಿಯರಾದ ಶಕುಂತಳಾ, ದೀಪಾ ಆರ್. ಕಾಮತ್ ಮತ್ತು ಪ್ರೀತಿ ಜಿ. ಸನಿಲ್ ಅವರು ರಚಿಸಿದ ಕವನಗಳ ಸಂಕಲನ ಭಾವದೀಪ್ತಿಯನ್ನು ಬಿಡುಗಡೆಗೊಳಿಸಿ ಮಾತನಾಡಿ ಭಾವೋದ್ವಿಗ್ನತೆಯನ್ನು ಸಂತುಲಿತ ಮನಸ್ಸಿನಿಂದ ಪ್ರಾಜ್ಞರಾಗಿ ನಿಯಂತ್ರಿಸುವ, ಹದಬೆರೆತು ಅಭಿವ್ಯಕ್ತಿಸುವ ಕಾರ್ಯದಿಂದ ಕವಿತೆ ಅಪ್ಯಾಯಮಾನವೂ ಮೌಲ್ಯಯುತವೂ ಆಗುತ್ತದೆ. ಕವಿತೆಯನ್ನು ಸರ್ವಜನಗ್ರಾಹಿಯಾಗುವಂತೆ ನಿರೀಕ್ಷಿತ ಸಂತಸವನ್ನು ಕೊಡುವಂತೆ ಮಾಡಲು ಯುವಕವಿಗಳು ಅಧ್ಯಯನಶೀಲತೆ ಹಾಗೂ ಪೂರ್ವಸೂರಿಗಳ ಕವಿತ್ವದ ಗುಣವನ್ನು ರೂಢಿಸಿಕೊಳ್ಳಬೇಕು ಎಂದರು.
         ಪ್ರಾಂಶುಪಾಲ ಡಾ. ನೇರಿ ಕನರ್ೇಲಿಯೋ ಅವರು ಅಧ್ಯಕ್ಷತೆ ವಹಿಸಿದ್ದರು. ಕಸಾಪ ಉಡುಪಿ ತಾಲೂಕು ಅಧ್ಯಕ್ಷ ಸಿ. ಉಪೇಂದ್ರ ಸೋಮಯಾಜಿ, ಯುವಕವಿಗೋಷ್ಠಿಯ ಅಧ್ಯಕ್ಷ ಯುವಕವಿ, ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ, ನಾರಾಯಣ ಮಡಿ, ಶಿತರ್ಾಡಿ ವಿಲಿಯಂ ಪಿಂಟೋ, ಸುಬ್ರಹ್ಮಣ್ಯ ಬಾಸ್ರಿ, ಗಣೇಶ್ಪ್ರಸನ್ನ ಮಯ್ಯ ಮೊದಲಾದವರು ಉಪಸ್ಥಿತರಿದ್ದರು.
        ಮಿಲಾಗ್ರಿಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ನಾರಾಯಣ ಎಂ. ಹೆಗಡೆ ಅವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾಥರ್ಿನಿ ಹೇಮಾ ಕಾರ್ಯಕ್ರಮ ನಿರ್ವಹಿಸಿದರು. ವಿ. ರಂಗಪ್ಪಯ್ಯ ಹೊಳ್ಳ ಅವರ ವಂದಿಸಿದರು. ಬಳಿಕ ನಡೆದ ಕವಿಗೋಷ್ಠಿಯಲ್ಲಿ ಗೋಷ್ಠಿ ಅಧ್ಯಕ್ಷ ಸೇರಿದಂತೆ ಜಿಲ್ಲೆಯ 23 ಯುವಕವಿಗಳು ತಮ್ಮ ಕವನಗಳನ್ನು ವಾಚಿಸಿದರು.

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com