ಭಂಡಾರ್‌ಕಾರ್ಸ್ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸ್ನೇಹಕೂಟ

ಕುಂದಾಪುರ: ಭಂಡಾರ್‌ಕಾರ್ಸ್ ಕಾಲೇಜಿನ ಬಿಎ ವಿಭಾಗದ ಹಳೆವಿದ್ಯಾರ್ಥಿಗಳ ಸ್ನೇಹಕೂಟ ಹೋಟೇಲ್ ಶೆರೂನ್ ನಲ್ಲಿ ಜರುಗಿತು.
      ಸಮಾರಂಭದಲ್ಲಿ ಕಾಲೇಜು ದಿನಗಳ ನೆನಪನ್ನು ಸವಿದ ಗೆಳೆಯರು ತಾವು ೧೯೮೬ನೇ ವರ್ಷದಲ್ಲಿ ಕಂಡ ಕಾಲೇಜು ದಿನಗಳಿಗೂ ಈಗಿನ ಕಾಲಕ್ಕೂ ಇರುವ ವ್ಯತ್ಯಾಸದ ಬಗೆಗೆ ಮಾತನಾಡಿಕೊಂಡರು. ಇದೇ ಸಂದರ್ಭದಲ್ಲಿ ಡಾ|| ಕೋಟ ಶಿವರಾಮ ಕಾರಂತ ಸದ್ಭಾವನ ರಾಜ್ಯ ಪ್ರಶಸ್ತಿಗೆ ಭಾಜನರಾದ ತಮ್ಮ ಸಹವರ್ತಿ ಶ್ರೀಮತಿ ಪ್ರಮೀಳಾ ಜೆ. ವಾಜ್‌ರವರಿಗೆ ಆತ್ಮೀಯ ಅಭಿನಂದನೆ ಸಲ್ಲಿಸಿದರು.
   ಶ್ರೀಮತಿ ಅಮೃತಾ ಶೆಟ್ಟಿ ದುಬೈ, ಶ್ರೀಮತಿ ಮಾಲತಿ ಶೆಟ್ಟಿ, ಶ್ರೀಮತಿ ಮಮತಾ ಕಾರಂತ್ ಮುಂತಾದವರು ವೇದಿಕೆಯ್ಲಲಿದ್ದರು. ಶ್ರೀ ಸತೀಶ್ ಬೈಂದೂರು ನಿರೂಪಿಸದರು. ಶ್ರೀಮತಿ ಯಶೋದ ಸೂಡ ಸ್ವಾಗತಿಸಿದರು. ಸೀಮಾ ಬ್ರಗಾಂಜಾ, ಪ್ರೀತಾ, ಜಯಂತಿ, ಬಾಲಕೃಷ್ಣ, ರೌಫ್ ಹಾಜರಿದ್ದರು.
ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com