ಎಂಡೋಸಲ್ಫ್ಪಾನ್ ಬಾಧಿತರಿಗೆ ನೆರವು: ಸಚಿವ ಅರವಿಂದ ಲಿಂಬಾವಳಿ


ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಎಂಡೋಸಲ್ಫಾನ್ ಬಾಧಿತರು ಇರುವ ಬಗ್ಗೆ ಇಲಾಖೆ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಬಾಧಿತರಿಗೆ ನೆರವು ನೀಡುವ ನಿಟ್ಟಿನಲ್ಲಿ ಮುತುವರ್ಜಿ ವಹಿಸಲಾಗುವವುದು ಎಂದು ಆರೋಗ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

       ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಸರಕಾರ ಶೀಘ್ರದಲ್ಲಿಯೇ ಹ್ಯಾಪೀಡ್ರಾಪ್ ಯೋಜನೆ ಜಾರಿಗೆ ತರಲಿದ್ದು, ತನ್ಮೂಲಕ ಗ್ರಾಮೀಣ ಬಡಜನರ ಮನೆ ಬಾಗಿಲಿಗೆ ಆರೋಗ್ಯ ಸೇವೆ ಉಚಿತವಾಗಿ ನೀಡಲಾಗುತ್ತದೆ ಎಂದು ತಿಳಿಸಿದರು.
         18 ಸಾವಿರ ಜನಸಂಖ್ಯೆಗನುಗುಣವಾಗಿ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ರಚನೆ ನಿಗದಿಗೊಳಿಸಲಾಗುವುದು. ಎಂಬಿಬಿ‌ಎಸ್ ಆದವರು ಆರಂಭಿಕ ಕಡ್ಡಾಯ ಗ್ರಾಮೀಣ ಸೇವೆ ಮಾಡಬೇಕಾಗುತ್ತದೆ. ಹೆರಿಗೆ ವೈದ್ಯರು ಕಡಿಮೆ ಇರುವಲ್ಲಿ ಸ್ತ್ರೀರೋಗ, ಅರಿವಳಿಕೆ ಬಗ್ಗೆ ತರಬೇತಿ ಕೊಟ್ಟು ಸೇವೆಗೆ ಬಳಸಿಕೊಳ್ಳುವ ಇರಾದೆಯೂ ಹೊಂದಲಾಗಿದೆ.
        ರಾಜ್ಯದಲ್ಲಿ 155 ಮಂದಿ ಎಂಬಿಬಿ‌ಎಸ್ ವೈದ್ಯರ ಅವಶ್ಯಕತೆ ಇದ್ದು, ಈಗಾಗಲೆ 145 ಹುದ್ದೆ ಭರ್ತಿಯಾಗಿದೆ. ಬಾಕಿ ಉಳಿದಿರವ ಹುದ್ದೆಯನ್ನು ಶೀಘ್ರದಲ್ಲೇ ಭರ್ತಿ ಮಾಡಲಾಗುವುದು. ಇನ್ನು ಮುಂದೆ 108 ಅಂಬ್ಯುಲೆನ್ಸ್ ಸೇವೆಯೊಂದಿಗೆ
         104 ಸೇವೆ ಜಾರಿಗೆ ಬರಲಿದೆ. ಸಣ್ಣ ಪುಟ್ಟ ತೊಂದರೆಗಳಿಗೆ 104 ಸಂಪರ್ಕಿಸಿದರೆ ಸೂಕ್ತ ಮಾಹಿತಿ, ಮಾರ್ಗದರ್ಶನ ಲಭ್ಯವಾಗುತ್ತದೆ. ಗಂಭೀರ ಸಮಸ್ಯೆಗಳಿದ್ದರೆ ಅದು 108 ಅಂಬ್ಯುಲೆನ್ಸ್ ಸೇವೆಗೆ ಸಂಪರ್ಕ ಮಾಡಿಕೊಡುತ್ತದೆ ಎಂದು ಸಚಿವರು ವಿವರಿಸಿದರು.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com