ಪ್ರೊ. ಎ. ವಿ. ನಾವಡ ಅಭಿನಂದನಾ ಸಮಾರಂಭ


ಕುಂದಾಪುರ: ಕುಂದಪ್ರಭ ಟ್ರಸ್ಟ್ ಮತ್ತು ಭಂಡಾರ್ಕಾರ್ಸ್ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಪ್ರೊ. ಎ. ವಿ. ನಾವಡ ಸಾಹಿತ್ಯಾವಲೋಕನ ಮತ್ತು ಅಭಿನಂದನಾ ಸಮಾರಂಭ ಇಲ್ಲಿನ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ಜರುಗಿತು. ಕಾರ್ಯಕ್ರಮವನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ. ಬಿ.ಎ. ವಿವೇಕ ರೈ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಡಾ. ಕೆ.ಚಿನ್ನಪ್ಪಗೌಡ ಧರ್ಮದರ್ಶಿ ಹರಿಕೃಷ್ಷ ಪುನರೂರು, ಹಿರಿಯ ನ್ಯಾಯವಾದಿ ಎ.ಎಸ್.ಎನ್. ಹೆಬ್ಬಾರ್,  ಮಂಗಳೂರಿನ ಕ.ತಿ.ಸಂ. ಕೇಂದ್ರದ ನಿರ್ದೇಶಕ ಡಾ. ರತ್ನಾಕರ ಸದಾನಂದ,  ಕುಂದಾಪುರ ಮಾಜಿ ರೊಟರಿ ಗವರ್ನರ್ ಸದಾನಂದ ಛಾತ್ರ, ಕುಂದಾಪುರ ಸ.ಪ.ಪೂರ್ವ ಕಾಲೇಜು  ಪ್ರಾಂಶುಪಾಲ ಸುಬ್ರಹ್ಮಣ್ಯ ಜೋಶಿ, ಭಂಡಾರ್ಕಾರ್ಸ್ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ ಮಡಾಮಕ್ಕಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ  ತುಳು ಪೊಲಿ ಕೃತಿಯನ್ನು  ಅನಾವರಣಗೋಳಿಸಲಾಯಿತು.

         ಕೊ. ಶಿವಾನಂದ ಕಾರಂತ ಪ್ರಸ್ತಾವಿಕವಾಗಿ ಮಾತನಾಡಿದರು. ಕುಂದಪ್ರಭ ಟ್ರಸ್ಟ್ನ ಅಧ್ಯಕ್ಷ ಯು. ಎಸ್.ಶೆಣೈ ಸ್ವಾಗತಿಸಿ, ಮಡಾಮಕ್ಕಿ ಶಶಿಧರ ಶೆಟ್ಟಿ ವಂದಿಸಿದರು. ವಿಶ್ವನಾಥ ಕರಬ ಕಾರ್ಯಕ್ರಮ ನಿರೂಪಿಸಿದರು.

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com