ಕುಂದಾಪುರ: ಕ್ರಿಕೆಟ್‌ ಬೆಟ್ಟಿಂಗ್ ಮಾಡುತ್ತಿದ್ದ ಆರೋಪಿ ಸೆರೆ

ಕುಂದಾಪುರ: ಇಲ್ಲಿನ ಕಂಡ್ಲೂರು ಬಸ್‌ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಮರದ ಅಡಿಯಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌ ನಡೆಸುತ್ತಿದ್ದ ಕಾವ್ರಾಡಿ ಗ್ರಾಮದ ದೂಪದಕಟ್ಟೆ ನಿವಾಸಿ ಮಹೇಶ ಆಚಾರಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಕೆ.ಪಿ.ಎಲ್‌ಕ್ರಿಕೆಟ್‌ಪಂದ್ಯಾಟದ ನಮ್ಮ ಶಿವಮೊಗ್ಗ ಹಾಗೂ ಬಿಜಾಪುರ ಬುಲ್ಸ್‌ತಂಡಗಳ ಸೋಲು ಗೆಲುವಿನ ಮೇಲೆ ಬೆಟ್ಟಿಂಗ್‌ನಡೆಸುತ್ತಿದ್ದುದನ್ನು ಖಚಿತಪಡಿಸಿಕೊಂಡು ಗಂಟೆಗೆ ದಾಳಿ ನಡೆಸಿದ ಕುಂದಾಪುರ ವೃತ್ತ ನಿರೀಕ್ಷಕ ದಿವಾಕರ್‌ ಪಿ.ಎಂ. ಅವರು , ಆತನನ್ನು ಬಂಧಿಸಿ ಮೊಬೆ„ಲ್‌, ರೂ.15 ಸಾವಿರ ನಗದು, ಚೆವರ್‌ಲೆಟ್‌ ಕಾರು ಹಾಗೂ ಇತರ ಪರಿಕರಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಗೋ ಸಾಗಾಟ: ಆರೋಪಿಗಳು ಪರಾರಿ

ಕುಂದಾಪುರ: ಇಲ್ಲಿನ ಕಾವ್ರಾಡಿ ಗ್ರಾಮದ ಕಂಡ್ಲೂರಿನಲ್ಲಿ ಓಮ್ನಿ ವಾಹನದಲ್ಲಿ ಅಕ್ರಮವಾಗಿ ದನಗಳನ್ನು ಸಾಗಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು ವಾಹನದಲ್ಲಿದ್ದ ಇಬ್ಬರು ಆರೋಪಿಗಳು ಪೊಲೀಸರನ್ನು ಕಂಡೊಡನೆ ದನ ಹಾಗೂ ವಾಹನವನ್ನು ಅಲ್ಲಿಯೇ ಬಿಟ್ಟು ಪರಾರಿಯಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಆರೋಪಿಗಳಲ್ಲಿ ಒಬ್ಬ ಜಾಕೀರ್ ಹುಸೈನ್ ಎಂದು ತಿಳಿದುಬಂದಿದೆ.

ಘಟನೆಯ ವಿವರ:
ಕಂಡ್ಲೂರಿನೆಡೆಗೆ ಅಕ್ರಮವಾಗಿ ಗೋವುಗಳನ್ನು ತುಂಬಿಸಿಕೊಂಡು ತೆರಳುತ್ತಿದ್ದಾರೆಂಬ ಮಾಹಿತಿಯನ್ನಾಧರಿಸಿ ಪೊಲೀಸರು ಕಂಡ್ಲೂರಿನ ಜುಲ್ಫಾ ಸ್ಟೋರ್ ಸಮೀಪ ವಾಹನವನ್ನು ಅಡ್ಡಗಟ್ಟಿದಾಗ ಆರೋಪಿಗಳು ಏಂ ೨೦ ಂ ೨೬೦೬ ನಂಬರಿನ ಓಮ್ಮಿಯನ್ನು ಅಲ್ಲಿಯೇ ಬಿಟ್ಟು ಕಾಲ್ಕಿತ್ತಿದ್ದಾರೆ. ಪೊಲೀಸರು ಅವರನ್ನು ಬೆನ್ನಟ್ಟಿಲು ಪ್ರಯತ್ನಿಸಿದರು ಅಷ್ಟರಲ್ಲೇ ಅವರು ಪರಾರಿಯಾಗಿದ್ದರು. ಬಳಿಕ ಓಮ್ನಿ ವಾಹನವನ್ನು ಪರಿಶೀಲಿಸಿದಾಗ ಅದರಲ್ಲಿ ಒಂದು ಹೆಣ್ಣುಕರು, ಎರಡು ಗಂಡುಕರು ಹಾಗೂ ಒಂದು ದನ ಸೇರಿ ಒಟ್ಟು ನಾಲ್ಕು ಜಾನುವಾರನ್ನು ಹಿಂಸಾತ್ಮಕವಾಗಿ ಕಟ್ಟಿಹಾಕಿ ಸಾಗಿಸುತ್ತಿದ್ದದ್ದು ತಿಳಿದುಬಂದಿತ್ತು.  (ಕುಂದಾಪ್ರ ಡಾಟ್ ಕಾಂ)
ವಾಹನವನ್ನು ಪೊಲೀಸರು ವಶಪಡಿಸಿಕೊಂಡು ಘಟನೆಯ ಕುರಿತು ಗೋಹತ್ಯಾ ನಿಷೇಧ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. (ಕುಂದಾಪ್ರ ಡಾಟ್ ಕಾಂ)


ಜಿಂಕೆ ಚರ್ಮ ಸಾಗಿಸುತ್ತಿದ್ದ ಈರ್ವರ ಬಂಧನ

ಕುಂದಾಪುರ: ತಾಲೂಕಿನ ಕಾಳವಾರ ಜಂಕ್ಷನ್ ಬಳಿ ಬೈಕಿನಲ್ಲಿ ಜಿಂಕೆ ಚರ್ಮವನ್ನು ಸಾಗಿಸುತ್ತಿದ್ದ ಇಬ್ಬರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಶಿರಸಿಯ ಅಡಂಗಿ ಗ್ರಾಮದ ಮೊಹಮ್ಮದ್ ಶಫಿ(26) ಹಾಗೂ ಸೊರಬದ ಮಸ್ತಾಫಾ(35) ಬಂಧಿತ ಆರೋಪಿಗಳು.

ಇಬ್ಬರೂ ಬೆಳಿಗ್ಗೆ ಬೈಕಿನಲ್ಲಿ ಚರ್ಮವನ್ನು ಸಾಗಿಸುತ್ತಿದ್ದಾಗ ಕಾಳವಾರ ಜಂಕ್ಷನ್ ಬಳಿ ಪೊಲೀಸರು ಅಡ್ಡಗಟ್ಟಿದ್ದರು. ಈ ವೇಳೆಯಲ್ಲಿ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಅನುಮಾನಗೊಂಡ ಪೊಲೀಸರು ಅವರ ಬ್ಯಾಗನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಅದರಲ್ಲಿ ಜಿಂಕೆ ಚರ್ಮವಿರುವುದು ಪತ್ತೆಯಾಗಿತ್ತು. 

ಆರೋಪಿಗಳನ್ನು ಕೂಡಲೆ ಬಂಧಿಸಿ ಸುಮಾರು 25,000ರೂ. ಮೌಲ್ಯದ ಜಿಂಕೆ ಚರ್ಮವನ್ನು ವಶಪಡಿಸಿಕೊಂಡು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಲಾಗಿದೆ.

ವಿಠಲವಾಡಿ ಶ್ರೀಕಾಂತ ಪೂಜಾರಿ ನೇಣಿಗೆ ಶರಣು

ಕುಂದಾಪುರ: ನಗರದ ವಿಠಲವಾಡಿಯ ಯುವಕನೋರ್ವ ಗುರುವಾರ ಮಧ್ಯಾಹ್ನದ ವೇಳೆಗೆ ತನ್ನ ಮನೆಯ ಮಹಡಿಯಲ್ಲಿ ಆತ್ಮಹತ್ಯೆ ಶರಣಾದ ಘಟನೆ ವರದಿಯಾಗಿದೆ. ಮೃತ ಯುವಕ ಕೆರೆಮನೆ ನಿವಾಸಿ ಶ್ರೀಕಾಂತ ಪೂಜಾರಿ(29) ಎಂದು ಗುರುತಿಸಿಲಾಗಿದೆ.

ಘಟನೆಯ ವಿವರ:
ಎಐಸಿ ರೋಡಿನಲ್ಲಿರುವ ಕೆರೆಮನೆ ನಿವಾಸಿ ಲಕ್ಷ್ಮಣ ಪೂಜಾರಿ ಅವರ ಕೊನೆಯ ಪುತ್ರನಾದ ಶ್ರೀಕಾಂತ ಉತ್ಪನ್ನವೊಂದರ ಡೀಲರ್‌ಶೀಪ್ ಮಾಡಿಕೊಂಡಿದ್ದರು. ಮನೆಯಲ್ಲಿ ಅಸೌಖ್ಯದಿಂದ ಇರುವ ಸಹೋದರನನ್ನು ಹೊರತು ಪಡಿಸಿ ಯಾರೂ ಇಲ್ಲದ ವೇಳೆಯಲ್ಲಿ ಮನೆಯ ಅಟ್ಟವನ್ನೇರಿದ ಶ್ರೀಕಾಂತ್ ನೇಣು ಬಿಗಿದುಕೊಂಡಿದ್ದಾರೆ. (ಕುಂದಾಪ್ರ ಡಾಟ್ ಕಾಂ ಸುದ್ದಿ)

ಅವರು ಈ ಹಿಂದೆಯೂ ಎರಡು ಭಾರಿ ಆತ್ಮಹತ್ಯೆಗೆ ಪ್ರಯತ್ನಿಸಿ ವಿಫಲರಾಗಿದ್ದರು ಎನ್ನಲಾಗಿದೆ. ಆದರೆ ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.  

ಮೃತರು ತಂದೆ-ತಾಯಿ, ಮೂವರು ಸಹೋದರರು ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಕೆ ನಡೆಸುತ್ತಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. (ಕುಂದಾಪ್ರ ಡಾಟ್ ಕಾಂ ಸುದ್ದಿ)

ಶ್ರೀಕಾಂತ ಒಳ್ಳೆಯ ನಡೆತೆಯ ಯುವಕನಾಗಿದ್ದು, ಅಪಾರ ಸ್ನೇಹಿತರನ್ನು ಸಂಪಾದಿಸಿದ್ದ. ಅವರ ಮೃತಪಟ್ಟ ಸುದ್ದಿ ಕೇಳಿದ ಕೂಡಲೇ ನೂರಾರು ಮಂದಿ ಆಸ್ಪತ್ರೆಯ ಬಳಿ ಜಮಾಯಿಸಿದ್ದರು. (ಕುಂದಾಪ್ರ ಡಾಟ್ ಕಾಂ ಸುದ್ದಿ)

ಶಾರ್ಟ್‌ ಸರ್ಕ್ಯೂಟ್‌: ಎರಡು ರಿಕ್ಷಾ ಬೆಂಕಿಗಾಹುತಿ

ಕುಂದಾಪುರ: ಇಲ್ಲಿನ ಸಂಗಮ್‌ ಬಳಿಯ ಆಟೋ ಗ್ಯಾರೇಜಿನಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ದುರಸ್ತಿಗಾಗಿ ಇರಿಸಲಾಗಿದ್ದ ಎರಡು ಆಟೋರಿಕ್ಷಾಗಳಿಗೆ ಬೆಂಕಿ ತಗುಲಿ ಸುಟ್ಟು ಹೋಗಿದ್ದು  ಸುಮಾರು ಒಂದೂವರೆ ಲಕ್ಷ  ರೂ. ಹಾನಿ ಸಂಭವಿಸಿದೆ.

ಕೊಲ್ಲೂರು ದಳಿ ನಿವಾಸಿ ನಾಗರಾಜ್‌ ಅವರು ದುರಸ್ತಿಗಾಗಿ ಇರಿಸಿದ್ದ  ಆಟೋರಿಕ್ಷಾ ಹಾಗೂ ಗ್ಯಾರೇಜ್‌ ಮಾಲಕ ಸಂತೋಷ್‌ ಅವರ ರಿಕ್ಷಾಕ್ಕೂ ಬೆಂಕಿ ತಗುಲಿ ಎರಡು ರಿಕ್ಷಾಗಳೂ ಸಂಪೂರ್ಣ ಸುಟ್ಟು ಹೋಗಿದೆ. 

ತಡ ರಾತ್ರಿ ರಿಕ್ಷಾಕ್ಕೆ ಬೆಂಕಿ ತಗಲಿದ್ದರಿಂದ ಬೆಂಕಿ ಹೊತ್ತಿ ಉರಿಯುವ ಶಬ್ದ ಕೇಳಿ ಪಕ್ಕದ ಮನೆಯವರು ಹೊರಗೆ ಬಂದು ನೋಡುವಾಗ ಎರಡೂ ರಿಕ್ಷಾಗಳಿಗೆ ಸಂಪೂರ್ಣ ಬೆಂಕಿ ತಗಲಿತ್ತು. ಕೂಡಲೇ ಅಕ್ಕಪಕ್ಕದವರು   ಪೈಪಿನಿಂದ ನೀರು ಹಾರಿಸಿ ಬೆಂಕಿಯನ್ನು ನಂದಿಸಿದರು. ಘಟನಾ ಸ್ಥಳಕ್ಕೆ ಕುಂದಾಪುರ ಠಾಣೆಯ ಪಿಎಸ್‌ಐ ನಾಸೀರ್‌ ಹುಸೆ„ನ್‌ ಹಾಗೂ ಡಿವೈಎಸ್ಪಿ ಮಂಜುನಾಥ್‌ ಶೆಟ್ಟಿ  ಭೇಟಿ ನೀಡಿ ಪರಿಶೀಲಿಸಿದ್ದಾರೆ.


ಬಸ್-ಟ್ರಕ್ ಅಪಘಾತ: ಒಬ್ಬ ಗಂಭೀರ, 12 ಮಂದಿಗೆ ಗಾಯ

ಕುಂದಾಪುರ: ಇಲ್ಲಿನ ತ್ರಾಸಿ ಬೀಚ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ಹಾಗೂ ಟ್ರಕ್ ನಡುವೆ ಸಂಭವಿಸಿದ ಭಾರಿ ಅಪಘಾತದಲ್ಲಿ ಟ್ರಕ್ ಚಾಲಕನಿಗೆ ಗಂಭೀರ ಗಾಯಗಳಾಗಿದ್ದರೇ, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 12ಕ್ಕೂ ಹೆಚ್ಚು ಮಂದಿಗೆ ಸಣ್ಣಪುಟ್ಟ ಗಾಯಗಳಾದ್ದು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಏನಾಯ್ತು?
ಭಟ್ಕಳ ಕುಂದಾಪುರಕ್ಕೆ ವೇಗಗಾಗಿ ಚಲಿಸುತ್ತಿದ್ದ ಖಾಸಗಿ ಎಂಪಿಎಂ ಬಸ್ಸು ಮತ್ತು ಕುಂದಾಪುರ ಕಡೆಯಿಂದ ಭಟ್ಕಳದೆಡೆಗೆ ಸಾಗುತ್ತಿದ್ದ  ಟ್ರೇಲರ್ ಲಾರಿ ತ್ರಾಸಿ ಬೀಚ್ ಸಮೀಪ ಮುಖಾಮುಖಿ ಡಿಕ್ಕಿಯಾಗಿತ್ತು, ಎರಡೂ ವಾಹನಗಳು ವೇಗವಾಗಿ ಬಂದು ಡಿಕ್ಕಿ ಹೊಡೆದಿದ್ದರಿಂದ ಬಸ್ ಹಾಗೂ ಟ್ರಕ್ಕಿನ ಮುಂಭಾಗ ಸಂಪೂರ್ಣ ಪುಡಿಯಾಗುತ್ತು.  (ಕುಂದಾಪ್ರ ಡಾಟ್ ಕಾಂ)

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಲಾರಿ ಚಾಲಕನ್ನು ಮಣಿಪಾಲದ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 12 ಮಂದಿ  ಗಾಯಾಳುಗಳನ್ನು ಕುಂದಾಪುರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಸಮಯದ ವರೆಗೆ ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಸ್ಥಳಕ್ಕಾಗಿಮಿಸಿದ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. (ಕುಂದಾಪ್ರ ಡಾಟ್ ಕಾಂ)

ಖಾಸಗಿ ವೇಗದೂತ ಬಸ್ಸು ಚಾಲಕರು ಮನಬಂದಂತೆ ಬಸ್ಸು ಚಲಾಯಿಸುವುದು ಇಂತಹ ಅಪಘಾತಗಳಿಗೆ ಎಡೆ ಮಾಡಿಕೊಡುತ್ತಿವೆ. ಪ್ರಯಾಣಿಕರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾದ ಅನಿವಾರ್ಯತೆ ಇದೆ. 


 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com